ಮಾಧವನ್ ಚಂದ್ರದತ್ತನ್ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ವಿಕ್ರಮ್ ಸಾರಾಭಾಯಿ ಬಾಹ್ಯಕಾಶ ಕೇಂದ್ರದ ಮಾಜಿ ನಿರ್ದೇಶಕರು.ಇವರಿಗೆ 2014ರಲ್ಲಿ ಭಾರತ ಸರ್ಕಾರವು ವಿಜ್ಞಾನ ಕ್ಷೇತ್ರಕ್ಕಾಗಿ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿದೆ. == ಜನನ == ಮಾಧವನ್ ಚಂದ್ರದತ್ತನ್ ಕೇರಳದ ವರ್ಕಲಾದಲ್ಲಿ ಜನಿಸಿದರು. ತಂದೆ ಮಾಧವನ್, ತಾಯಿ ವಾಸುಮತಿ. 1971ರಲ್ಲಿ ತ್ರಿಶೂರಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಿಂದ ರಾಸಾಯನಿಕ ಎಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದರು. ನಂತರ ಬಿರ್ಲಾ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ನಾತಕೋತರ ಪದವಿಯನ್ನು ಪಡೆದರು. == ಆರಂಭಿಕ ಜೀವನ == ಎಂ.ಸಿ.ದತ್ತನ್ ರವರು 1972ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನೆ ಕೇಂದ್ರದಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದರು. ಅವರು ಎಸ್. ಎಲ್. ವಿ-೩ ಯೋಜನೆಗಾಗಿ ಕೆಲಸವನ್ನು ಮಾಡಿದರು. 2008ರಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ನಿರ್ದೇಶಕರಾಗಿ ನೇಮಕಗೊಂಡರು ಮತ್ತು 2013ರಲ್ಲಿ ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್ಸ್ ಸೆಂಟರ್ ನ ನಿರ್ದೇಶಕರಾಗಿ ಆಯ್ಕೆಗೊಂಡರು. 2014ರಲ್ಲಿ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾದರು. ಅಲ್ಲದೆ ಚಂದ್ರಯಾನ-೧ ಯೋಜನೆಯ ಉಡಾವಣೆ ಮಂಡಳಿಯ ಮುಖ್ಯಸ್ಥರಾಗಿದ್ದರು. ಮೇ 2016ರಲ್ಲಿ ಕೇರಳ ಸರ್ಕಾರವು ಎಂ. ಸಿ. ದತ್ತನ್ ರವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ವೈಜ್ಞಾನಿಕ ಸಲಹೆಗಾರನಾಗಿ ನೇಮಿಸಿತು. == ಗೌರವಗಳು == ಪರ್ಫಾರ್ಮೆನ್ಸ್ ಎಕ್ಸಲೆನ್ಸ್ ಅವಾರ್ಡ್ (2009) ಅತ್ಯುತ್ತಮ ರಾಸಾಯನಿಕ ಎಂಜಿನಿಯರ್ ಪ್ರಶಸ್ತಿ (2009) ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ (2014) == ಉಲ್ಲೇಖಗಳು ==